ಪುಂಡಲೀಕ ಕಲಾಪ್ರಪಂಚ
Saturday, September 8, 2012
Saturday, October 4, 2008
ಜುಗಲ್‌ಬಂದಿ
ಕೂಡಲಸಂಗಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಹಾಗು ಬಸವ ಸಮಿತಿ ಏರ್ಪಡಿಸಿದ್ದ ವಚನಗಾಯಕರೊಂದಿಗಿನ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಈ ಅನುಭವ ನನ್ನ ಕಲಾಜೀವನದಲ್ಲಿ ಅತ್ಯಂತ ಸವಾಲಿನದ್ದು. ವಚನಗಳು ಇರುವುದೇ ಸಾಮಾನ್ಯವಾಗಿ ನಾಲ್ಕರಿಂದ ಆರು ಸಾಲು. ವಚನಗಾಯಕರು ವಚನಗಳನ್ನು ನಾಲ್ಕು ನಿಮಿಷಕ್ಕಿಂತ ಹೆಚ್ಚು ಹಾಡುವುದಿಲ್ಲ. ಅವರೊಂದಿಗೆ ಜುಗಲ್‌ಬಂದಿ ಮಾಡುವುದು ನಿಜವಾದ ಸವಾಲು. ನಾಲ್ಕೇ ನಿಮಿಷಗಳ ಒಳಗೆ ಚಿತ್ರ ಬರೆದು ಮುಗಿಸುವ ಸವಾಲಿಗೆ ಒಡ್ಡಿಕೊಂಡು ಬರೆದ ಕೆಲವು ಚಿತ್ರಗಳು ವಚನಗಳ ಸಮೇತ ನಿಮ್ಮ ಮುಂದಿವೆ.
Wednesday, October 1, 2008
ಲಂಕೇಶರ ವಿಶ್ವರೂಪ
ಐದು ವರ್ಷಗಳ ಕಾಲ ಪಿ.ಲಂಕೇಶರನ್ನು ಸಮೀಪದಿಂದ ಕಂಡ ನಾನು ಅವರ ಬಹುಮುಖಿ ವ್ಯಕ್ತಿತ್ವವನ್ನು ನನ್ನ ಕುಂಚದಿಂದ ಸೆರೆಹಿಡಿಯಲು ಯತ್ನಿಸಿದ್ದೇನೆ. ಅದ್ಭುತ ಲೇಖಕ, ಕ್ರಾಂತಿಕಾರಿ ಪತ್ರಕರ್ತ, ಸೃಜನಶೀಲ ಸಿನಿಮಾ ನಿರ್ದೇಶಕ ಹೀಗೆ ಹಲವು ಟಿಸಿಲು ಒಡೆದುಕೊಂಡು ಬಂದ ಲಂಕೇಶರು ಕುಡಿತ, ಕುದುರೆರೇಸು, ಸಿಗರೇಟು, ಇಸ್ಪೀಟುಗಳನ್ನೂ ಸಹ ಅತ್ಯಂತ ಪ್ರೀತಿಯಿಂದ ಅನುಭವಿಸಿ, ಆಸ್ವಾದಿಸಿದವರು.ಈ ಹುಳಿಮಾವಿನ ಮರವನ್ನು ನಾನು ಕಂಡಿದ್ದು ಹೀಗೆ...
Subscribe to:
Posts (Atom)