
ಕೂಡಲಸಂಗಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಹಾಗು ಬಸವ ಸಮಿತಿ ಏರ್ಪಡಿಸಿದ್ದ ವಚನಗಾಯಕರೊಂದಿಗಿನ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಈ ಅನುಭವ ನನ್ನ ಕಲಾಜೀವನದಲ್ಲಿ ಅತ್ಯಂತ ಸವಾಲಿನದ್ದು. ವಚನಗಳು ಇರುವುದೇ ಸಾಮಾನ್ಯವಾಗಿ ನಾಲ್ಕರಿಂದ ಆರು ಸಾಲು. ವಚನಗಾಯಕರು ವಚನಗಳನ್ನು ನಾಲ್ಕು ನಿಮಿಷಕ್ಕಿಂತ ಹೆಚ್ಚು ಹಾಡುವುದಿಲ್ಲ. ಅವರೊಂದಿಗೆ ಜುಗಲ್ಬಂದಿ ಮಾಡುವುದು ನಿಜವಾದ ಸವಾಲು. ನಾಲ್ಕೇ ನಿಮಿಷಗಳ ಒಳಗೆ ಚಿತ್ರ ಬರೆದು ಮುಗಿಸುವ ಸವಾಲಿಗೆ ಒಡ್ಡಿಕೊಂಡು ಬರೆದ ಕೆಲವು ಚಿತ್ರಗಳು ವಚನಗಳ ಸಮೇತ ನಿಮ್ಮ ಮುಂದಿವೆ.














